ದಕ್ಷಿಣ ಕನ್ನಡ: ಜನವರಿ 28ರಂದು ಅಂಕೋಲಾ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 66ರ ರಾಮನಗುಳಿ ಎಂಬಲ್ಲಿನ ಒಳರಸ್ತೆಯ ನಿರ್ಜನ ಪ್ರದೇಶದಲ್ಲಿ ಬಿಳಿ ಬಣ್ಣದ ಕ್ರೆಟಾ ಕಾರು ಹಿಂಬದಿ ಜಖಂಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರನ್ನು ಪೊಲೀಸರು ಪರಿಶೀಲಿಸಿದಾಗ, ಹಿಂಬದಿ ಸೀಟಿನ ಅಡಿಯಲ್ಲಿ ಬಾಕ್ಸ್ ನಲ್ಲಿ 1.15 ಕೋಟಿ ರೂಪಾಯಿ ನಗದು ಹಣ ಇಟ್ಟಿರುವುದು ಪತ್ತೆಯಾಗಿತ್ತು. ಕಾರಿನ ನೋಂದಣಿ ಸಂಖ್ಯೆ ಬದಲಿಸಿರುವುದು ಮತ್ತು ಕಾರಿನ ಗಾಜುಗಳನ್ನು ಒಡೆದು ಹಾನಿ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿತ್ತಲ್ಲದೆ, ಕೋಟಿ ರೂ.ಗಳ ವಾರಿಸುದಾರರು ಯಾರು ಎನ್ನುವ ಬಗ್ಗೆ ಕುತೂಹಲಕ್ಕೆ ಕಾರಣವಾಗಿತ್ತು.ಮಂಗಳೂರು (Mangalore)ಮೂಲದ ಜುವೆಲ್ಲರಿ ಉದ್ಯಮಿ ರಾಜೇಶ್ ಪವಾರ್ ಎಂಬುವವರಿಗೆ ಸೇರಿದ್ದ ಕಾರ್ ಇದಾಗಿದ್ದು ರಾಜೇಶ್ ಪವಾರ್ ಮತ್ತು ಕಾರಿನ ಚಾಲಕರು ಘಟನೆ ನಡೆದ ಕೆಲವು ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ಪ್ರಕರಣ ದಾಖಲಿಸಿದ್ದರು.
ದರೋಡೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಚಾಲಕರಿಬ್ಬರನ್ನು ಬಂಧನ ಮಾಡಿ ತನಿಖೆ ಮಾಡಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಂದಿದೆ. ಮಂಗಳೂರು (Mangalore)ಹೊರವಲಯದ ಅಡ್ಯಾರ್, ಬಜಾಲ್ನಲ್ಲಿ ಸಕ್ರಿಯವಾಗಿರುವ ನಟೋರಿಯಸ್ ತಲ್ಲತ್ ಗ್ಯಾಂಗ್ನ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ..
ಘಟನೆಯ ವಿವರ:
ರಾಜೇಂದ್ರ ಪವಾರ್ ಅವರ ಕಾರು ಚಾಲಕನಾದ ಮಹಮ್ಮದ್ ಇಸಾಕ್ ಎಂಬಾತ ಜುವೆಲ್ಲರಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಪವಾರ್ ರಸೂಚನೆಯಂತೆ ಬೆಳಗಾವಿಯ ಸಚಿನ್ ಜಾಧವ್ ಎಂಬವರಿಗೆ ಬಂಗಾರ ತಲುಪಿಸಲು ಕಾರಿನಲ್ಲಿ ತೆರಳಿದ್ದ. ಈ ವೇಳೆ, ಮಹಮ್ಮದ್ ಇಸಾಕ್ ತನ್ನ ಜೊತೆಗೆ ಇನ್ನೋರ್ವ ಕಾರು ಚಾಲಕ అబ్దుಲ್ ಸಮದ್ ಎಂಬಾತನನ್ನು ಜೊತೆಗೆ ಕರೆದೊಯ್ದಿದ್ದು, ಜ.26ರಂದು ಬೆಳಗ್ಗೆ 3.45ಕ್ಕೆ ಕೆಎ 19 ໖໐໖ 1036 ನಂಬರಿನ ಕಾರಿನಲ್ಲಿ ಬೆಳಗಾವಿಗೆ ತೆರಳಿದ್ದರು. ಈ ವೇಳೆ ಸೀಟಿನ ಅಡಿಭಾಗದಲ್ಲಿ ಲಾಕರಿನಲ್ಲಿ ಬಂಗಾರ ಇಟ್ಟಿದ್ದು ಕಾರಿನ ನಂಬರ್ ಪ್ಲೇಟನ್ನು ಬದಲಿಸಿ (ಕೆಎ 51 ಎಂಬಿ 9634) ಬೆಳಗಾವಿ ನಗರದತ್ತ ಹೊರಟಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಬೆಳಗಾವಿ ತಲುಪಿದ್ದು,
ಅಲ್ಲಿ ತುಷಾರ್ ಎನ್ನುವವರು ಬಂದು 2.95 ಕೋಟಿ ರೂ ನಗದು ನೀಡಿ ಬಂಗಾರವನ್ನು ಪಡೆದುಕೊಂಡಿದ್ದರು.
ಈ ಹಣದಲ್ಲಿ 1.80 ಕೋಟಿ ರೂ.ವನ್ನು ಚಾಲಕನ ಅಡಿಭಾಗದ ಸೀಟಿನಡಿಯಲ್ಲಿ ಇಟ್ಟಿದ್ದರೆ, ಉಳಿದ 1.15 ಕೋಟಿ ರೂ.ವನ್ನು ಹಿಂಬದಿ ಸೀಟಿನ ಅಡಿಯಲ್ಲಿ ಬಾಕ್ಸ್ ನಲ್ಲಿ ಇಟ್ಟಿದ್ದರು. ಅದೇ ದಿನ ಕಾರಿನಲ್ಲಿ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಓವರ್ ಟೇಕ್ ಮಾಡಿ ಬಂದ ಐದು ಜನ ಅಪರಿಚಿತ ವ್ಯಕ್ತಿಗಳು ತಲವಾರು, ಚಾಕು ಹಿಡಿದು ಅಡ್ಡಗಟ್ಟಿ ಕಾರಿನ ಗಾಜುಗಳನ್ನು ಒಡೆದು ಇಬ್ಬರು ಚಾಲಕರ ಮೊಬೈಲ್, ಪರ್ಸ್ ಕಿತ್ತುಕೊಂಡು ಕಾರನ್ನು ಅಪಹರಿಸಿ ಚಾಲಕನ ಸೀಟಿನ ಅಡಿಯಲ್ಲಿದ್ದ 1.80 ಕೋಟಿ ರೂ. ಹಣವನ್ನು ದರೋಡೆ ಮಾಡಿದ್ದರು. ಬಳಿಕ ಕಾರನ್ನು ರಾಮನಗುಳಿಯ ಒಳರಸ್ತೆಯಲ್ಲಿ ಬಿಟ್ಟು ತೆರಳಿದ್ದರು ಎಂದು ಪೊಲೀಸ್ ಠಾಣೆಗೆ ಹಾಜರಾದ ನಾಲ್ವರು ದೂರಿನಲ್ಲಿ ತಿಳಿಸಿದ್ದಾರೆ.
ಸದರೀ ಈ ಘಟನೆ ಉತ್ತರಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕುತೂಹಲ ಮೂಡಿಸಿತ್ತು.ಪ್ರಕರಣ ಬೇದಿಸುತ್ತಾ ಹೋದ ಪೋಲೀಸರಿಗೆ ಪ್ರಕರಣದ ಆಳ ಇನ್ನಷ್ಟು ಇರುವುದು ತಿಳಿದಿದೆ.
ಹಣ ಸಿಕ್ಕಿದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ. ಪ್ರಕರಣದಲ್ಲಿ ದೊಡ್ಡ ಮಟ್ಟದ ಹವಾಲಾ ಜಾಲ ಸಕ್ರಿಯವಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
Post a Comment
you have any doubt, let me know..