ಕೂಲ್ ಡ್ರಿಂಕ್ ಕುಡಿಯುವವರಿಗೆ WHO ನೀಡಿದ ಎಚ್ಚರಿಕೆ ಏನು?
*ಕೂಲ್ ಡ್ರಿಂಕ್ ಗೆ ಆಸ್ಪರ್ಟೇಮ್ ಬಳಸದಂತೆ ಎಚ್ಚರಿಕೆ ನೀಡಿದ WHO.
*ಅಮೇರಿಕಾದ ಸಂಶೋದನೆಯಲ್ಲಿ ಮಾರಣಾಂತಿಕ ಕಾಯಿಲೆ ಪತ್ತೆ.
*1981 ರಿಂದ ಆಸ್ಪರ್ಟಾಮ್ ಬಳಕೆ.
ತಂಪುಪಾನಿಯ, ಚಾಕೊಲೇಟ್ ಹಾಗೂ ಚೂಯಿಂಗಮ್ ನಂತಹ ತಿನಿಸುಗಳಲ್ಲಿ ಬಳಸುವ ಆಸ್ಪರ್ಟಾಮ್ ಪದಾರ್ಥದಿಂದ ಕ್ಯಾನ್ಸರ್ ಬರುವ ಸಂಭಾವ್ಯವನ್ನು ಅಮೇರಿಕಾದ ಕ್ಯಾನ್ಸರ್ ಸಂಶೋಧನಾ ಕೇಂದ್ರ ಸ್ಪಷ್ಟಪಡಿಸಿದೆ.
ಆಸ್ಪರ್ಟಾಮ್ ಬಳಕೆ 1981 ರಿಂದ ಕೃತಕ ತಿನಿಸುಗಳು ಮತ್ತು ತಂಪು ಪಾನಿಯಗಳಲಗಲ್ಲಿ ಬಳಕೆ ಚಾಲನೆಯಲ್ಲಿದೆ.ಈ ಹಿಂದೆಯೂ ವಿಶ್ವ ಆರೋಗ್ಯ ಸಂಸ್ಥೆ ಇದರ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದ್ದೂ ಇದನ್ನು ಐದು ಬಾರಿ ಪರೀಕ್ಷಿಸಿ ಬಳಕೆಗೆ ಅನುಮೋದನೆ ನೀಡಲಾಗಿತ್ತು. ಹೀಗಾಗಿ ಭಾರತ ಸೇರಿ 80 ಕ್ಕೂ ಅಧಿಕ ದೇಶಗಳಲ್ಲಿ ಆಸ್ಪರ್ಟಾಮ್ ಬಳಕೆ ಮಾಡಲಾಗುತ್ತದೆ.
*ಆಸ್ಪರ್ಟಾಮ್ ಅಂದರೆ ಏನು?*
ಆಸ್ಪರ್ಟಾಮ್ ಎಂಬುವ ಪಧಾರ್ಥವು ನಾವು ಪ್ರತಿನಿತ್ಯ ಬಳಸುವ ಸಕ್ಕರೆಗಿಂತ 200 ಪಟ್ಟು ಸಿಹಿಯಾಗಿರುತ್ತದೆ. ಇದಕ್ಕೆ ಕ್ಯಾಲೊರಿ ಇರುವುದಿಲ್ಲ. 2009 ರಲ್ಲಿ ಭಾರತದ FSSAI ಈ ಕೃತಕ ಸಿಹಿಯ ಬಳಕೆಗೆ ಅನುಮತಿ ನೀಡಿತಾದರೂ ಇದರಲ್ಲಿ ಉಪಯೋಗಿಸುವ ರಾಸಾಯನಿಕಗಳ ಬಗ್ಗೆ ಪ್ಯಾಕ್ ಮೇಲೆ ನಮೂದಿಸುವಂತೆ ತಿಳಿಸಿತ್ತು.
ಕೋಕಾ-ಕೋಲಾ ಮತ್ತು ಪೆಪ್ಸಿಕೋದಂತ ಕಂಪನಿಗಳು ಸಂಶೋಧನಾ ಸಂಸ್ಥೆಯ ವರದಿಯನ್ನು ನಿರಾಕರಿಸಿ ಮಾಡಿ ವಿರೋಧ ವ್ಯಕ್ತಪಡಿಸಿವೆ. ಆಸ್ಪರ್ಟೆಮ್ ಸುರಕ್ಷಿತವಾಗಿದೆ ಎಂದು ವೈಜ್ಞಾನಿಕ ಪರಿಶೀಲನೆ ಮಾಡಿದ ಬಳಿಕವೇ ಅದನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲಾ ಕಂಪನಿಗಳಲ್ಲಿ ಒಮ್ಮತವಿದೆ. ಪ್ರಪಂಚದಾದ್ಯಂತ ಇರುವ ಎಲ್ಲ ಆಹಾರ ಸುರಕ್ಷತಾ ಏಜೆನ್ಸಿಗಳು ಯಾವುದೇ ಸಮಸ್ಯೆ ಇಲ್ಲ. ಹೀಗಿದ್ದೂ ಈ ಆರೋಪ ಮಾಡುವುದು ಸರಿಯಲ್ಲ ಎಂದು ಪಾನೀಯ ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ಕೀನ್ ಹೇಳಿದ್ದಾರೆ.
ಇದರ ಬಗ್ಗೆ ಫ್ರಾನ್ಸ್‌ನಲ್ಲೂ ಸಂಶೋಧನೆ ನಡೆದಿದ್ದು ಅಲ್ಲಿಯೂ ಕೂಡ ಆಸ್ಪರ್ಟಾಮ್ ಕ್ಯಾನ್ಸರ್ಕಾರಕ ಎಂದು ವರದಿ ನೀಡಿದೆ.
ಮೇ ನಲ್ಲಿ WHO ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಕ್ಕರೆಯೇತರ ಸಿಹಿಕಾರಕಗಳು ಅಥವಾ NSS ಅನ್ನು ಬಳಸದಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
Post a Comment
you have any doubt, let me know..